ಅಭಿಪ್ರಾಯ / ಸಲಹೆಗಳು

ಇಲಾಖೆಯ ಬಗ್ಗೆ

 

ಡಾ.ಎಚ್.ಎನ್.ಗೋಪಾಲಕೃಷ್ಣ, ಐಎಎಸ್
ಕಾರ್ಮಿಕ ಆಯುಕ್ತರು

 

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯು 1935ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ಒಬ್ಬ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಿಯಿದ್ದಂತೆ. ಕಾರ್ಮಿಕ ಇಲಾಖೆಯು ಕೇಂದ್ರದ 23 ಕಾಯ್ದೆಗಳು ಹಾಗೂ ರಾಜ್ಯದ 04 ಕಾರ್ಮಿಕ ಕಾಯ್ದೆಗಳನ್ನು ಅನುಷ್ಟಾನಗೊಳಿಸುತ್ತಿದೆ. ರಾಜ್ಯದಲ್ಲಿ ಉದ್ಭವಿಸುವ ಕೈಗಾರಿಕಾ ವಿವಾದಗಳನ್ನು ತ್ರೀಪಕ್ಷೀಯವಾಗಿ ಹಾಗೂ ಸೌಹಾರ್ದಯುತ ನೆಲೆಯಲ್ಲಿ ಬಗೆಹರಿಸಿ, ಕೈಗಾರಿಕಾ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮೇಲ್ವಿಚಾರಣೆ ನಡೆಸುತ್ತಾ ಬಂದಿರುತ್ತದೆ.

                                                                                             

 

       ಸಮಸ್ತ ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸಿ, ಅವರ ಸ್ಥಿತಿಗತಿಗಳನ್ನು ಉತ್ತೇಜಿಸುವುದು ಇಲಾಖೆಯ ಪರಮೋಚ್ಚ ಗುರಿಯಾಗಿದೆ. ಅಲ್ಲದೇ ಇದರ ಜೊತೆಗೆ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುವುದೂ ಸೇರಿದಂತೆ - ಮಾನವ ಸಂಪನ್ಮೂಲದ ಸಮರ್ಪಕ ಸದ್ಬಳಕೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ನಿರ್ಮಿಸಿ ಅರ್ಥಪೂರ್ಣ ಕೈಗಾರಿಕಾ ಬಾಂಧವ್ಯವನ್ನು ಕಾಪಾಡುವುದರ ಮೂಲಕ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ.

ಈ ಹಿಂದೆ ಕೃಷಿ ಪ್ರಧಾನ ಕಸುಬಾಗಿದ್ದು, ಕೃಷಿ ಕಾರ್ಮಿಕರು ಹಾಗೂ ಮಾಲೀಕರ ಸಂಬಂಧವು ಸರಳ ಹಾಗೂ ಸೌಹಾರ್ದಯುತವಾಗಿತ್ತು. ಆದರೆ ತದನಂತರದಲ್ಲಾದ ಕೈಗಾರಿಕೀಕರಣ ಹಾಗೂ ಇನ್ನಿತರೆ ಕಾರಣಗಳಿಂದಾಗಿ, ರಾಜ್ಯದಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪಿತವಾದವು. ಇದರಿಂದಾಗಿ ಕಾರ್ಮಿಕರ ಸಂಖ್ಯೆ ಹೆಚ್ಚಾಯಿತು. ಜೊತೆಜೊತೆಗೆ ಕಾರ್ಮಿಕ ಸಂಘಟನೆಗಳು ಹಾಗೂ ಅವುಗಳ ಚಟುವಟಿಕೆಗಳು ತೀವ್ರತರವಾಗಿ ಬೆಳವಣಿಗೆಯಾಗಿರುವುದನ್ನು ಕಾಣಬಹುದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೈಗಾರಿಕಾ ವಲಯದ ಬೆಳವಣಿಗೆಯು ಸೀಮಿತವಾಗಿತ್ತು ಎಂದೇ ಹೇಳಬಹುದು. ಆದ್ದರಿಂದ, ಕಾರ್ಮಿಕ ಸಂಘಟನೆಯೂ ಕೂಡಾ ಸೀಮಿತವಾಗಿಯೇ ಇತ್ತು. ಅಂದು ರಾಜ್ಯದಲ್ಲಿ ಕಾರ್ಮಿಕ ವಲಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿರಲಿಲ್ಲವೆಂದು ಭಾವಿಸಬಹುದಾದರೂ ಸಹ, ಪ್ರಸ್ತುತದಲ್ಲಿ ಕಾರ್ಮಿಕ ವಲಯವು ರೈತ ಸಮುದಾಯವನ್ನು ಬಿಟ್ಟರೆ, 2ನೇ ಅತಿ ದೊಡ್ಡ ದುಡಿಯುವ ಸಮುದಾಯವಾಗಿದೆ.

 

ಹಿಂದಿನ ದಿನಗಳಲ್ಲಿ ಕಾರ್ಮಿಕರನ್ನು ಒಂದು ವಸ್ತುವಿನಂತೆ ಪರಿಗಣಿಸಲಾಗುತ್ತಿತ್ತು. ಅದರಿಂದಾಗಿ ಉದ್ಯೋಗದ ಸೇವಾ ಷರತ್ತುಗಳು ಅಷ್ಟಾಗಿ ಮಹತ್ವ ಪಡೆಯದೇ ಮಾಲೀಕರ ನಿಯಂತ್ರಣಕ್ಕೊಳಪಟ್ಟಿತ್ತು. ಉದಾಹರಣೆಗೆ ತೋಟಗಾರಿಕಾ ವಲಯಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಮಾಲೀಕರ ನಡುವೆ – Contract Act 1859ರ ಪ್ರಕಾರ ಆದ ಒಪ್ಪಂದಗಳಲ್ಲಿನ ಷರತ್ತುಗಳ ಉಲ್ಲಂಘನೆಯಾದಲ್ಲಿ ಹಾಗೂ ತೋಟ ಕಾರ್ಮಿಕರು ಕೆಲಸ ಬಿಟ್ಟು ಓಡಿ ಹೋದ ಸಂದರ್ಭಗಳಲ್ಲಿ ಅವರುಗಳನ್ನು ಆರಕ್ಷಕರು ಬಂಧಿಸುವುದಲ್ಲದೇ ಕ್ರಿಮಿನಲ್ ಆರೋಪಗಳನ್ನು ಹೊರಿಸಿ, ಜೂಡಿಸಿಯಲ್ ನ್ಯಾಯಾಲಯಗಳಲ್ಲಿ ಆರೋಪಿಯನ್ನಾಗಿಸಿ ಶಿಕ್ಷೆ ವಿಧಿಸಲಾಗುತ್ತಿತ್ತು. ಆ ದಿನಗಳಲ್ಲಿ ಕಾರ್ಮಿಕರ ರಕ್ಷಣೆ ಮತ್ತು ಅವರ ಹಕ್ಕುಗಳನ್ನು ಕಾಪಾಡುವ ಯಾವುದೇ ಕಾರ್ಮಿಕ ಕಾನೂನುಗಳು ರಚನೆಯಾಗಿರಲಿಲ್ಲ. ಕಾರ್ಮಿಕರಿಗೂ ಸಹ ಅವರ ಹಕ್ಕಿನ ಬಗ್ಗೆ ಅರಿವಿಲ್ಲವಾದ್ದರಿಂದ, ಅವರು ಮಾಲೀಕರಿಂದ ಶೋಷಣೆಗೆ ಒಳಗಾಗುತ್ತಿದ್ದರು.

ಕಾರ್ಮಿಕರ ಇಂಥ ಸಂಕಷ್ಟಗಳನ್ನು ಪರಿಹರಿಸಿ, ಅವರ ಹಕ್ಕುಗಳ ರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಯ ಧ್ಯೇಯವನ್ನಿರಿಸಿಕೊಂಡು, ಕಾರ್ಮಿಕ ಇಲಾಖೆಯು ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದಲ್ಲಿ ಮಾನವ ಸಂಪನ್ಮೂಲ ಹಾಗೂ ಕೈಗಾರಿಕೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸಿ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕಾರ್ಮಿಕ ಇಲಾಖೆಯು ಅಸ್ತಿತ್ವಕ್ಕೆ ಬಂದು ಇಂದಿಗೆ 8 ದಶಕಗಳಾಗಿದ್ದು, ಅದರ ಉದ್ದೇಶಿತ ಕಾರ್ಯ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬಂದಿರುತ್ತದೆ. ಪ್ರಸ್ತುತ, ಕಾರ್ಮಿಕ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ಮಹತ್ತರ ಬದಲಾವಣೆಯಾಗಿದೆ. ಕಾರ್ಮಿಕರ ಶ್ರೇಯೋಭಿವೃದ್ಧಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ವೈವಿದ್ಯಮಯವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರದ 23 ಹಾಗೂ ರಾಜ್ಯದ 04 ಕಾರ್ಮಿಕ ಕಾಯ್ದೆಗಳ ಅನುಷ್ಟಾನಗೊಳಿಸುವುದು. ಮಾಲೀಕ ಮತ್ತು ಕಾರ್ಮಿಕರ ನಡುವೆ ಉದ್ಭವಿಸುವ ಕೈಗಾರಿಕಾ ವಿವಾದಗಳನ್ನು ಸೌಹರ್ದಯುತವಾಗಿ ಹಾಗೂ ತ್ರೀಪಕ್ಷೀಯವಾಗಿ ಬಗೆಹರಿಸುವುದು, ಇಲಾಖೆಯ ಪ್ರಮುಖ ಧ್ಯೇಯವಾಗಿದೆ.

 

ಇಲಾಖೆಯು ಪ್ರಸ್ತುತ ಬಹುಸಂಖ್ಯಾತ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದ್ದು, ಅಸಂಘಟಿತ ಕಾರ್ಮಿಕರು ಸೇರಿದಂತೆ, ಎಲ್ಲಾ ವರ್ಗದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಸಾಮಾಜಿಕ ಹಾಗೂ ಆರ್ಥಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಉದಾಹರಣೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳಡಿ ಲಭ್ಯವಿರುವ ಸೌಲಭ್ಯಗಳು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಾರಿಗೆ ತಂದಿರುವ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗಳು ಪ್ರಮುಖವಾಗಿವೆ. ಇಲಾಖೆಯ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಬಂಧಿಸಿದ ಕಾರ್ಮಿಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಹಲವಾರು ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಈ ರೀತಿಯಾಗಿ ಕಾರ್ಮಿಕ ಇಲಾಖೆಯು ಇಂದು ತನ್ನ ವೈವಿಧ್ಯಮಯ ಕಾರ್ಯ ಚಟುವಟಿಕೆ ಹಾಗೂ ತನ್ನದೇ ಆದ ಪಾತ್ರ ನಿರ್ವಹಣೆಯಿಂದ ರಾಜ್ಯದಲ್ಲಿ ಪ್ರಮುಖ ಹಾಗೂ ಮುಂಚೂಣಿ ಇಲಾಖೆ ಎಂಬ ಮನ್ನಣೆಗೆ ಪಾತ್ರವಾಗಿದೆ.

 

 

 

ಇತ್ತೀಚಿನ ನವೀಕರಣ​ : 03-07-2023 02:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಾರ್ಮಿಕ ಆಯುಕ್ತಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080